ಕಾಫ್ಕಾ, ಕರ್ಟ್

 1886-1941. ವೂರ್‍ಸ್‍ಬರ್ಗ್‍ನಲ್ಲಿ ಕಾರ್ಲ್ ಸ್ಟುಂಫನ ಶಿಷ್ಯನಾಗಿ ಫ್ರಾಂಕ್‍ಫರ್ಟ್‍ನಲ್ಲಿ ಮ್ಯಾಕ್ಸ್ ವೆರ್ತೈಮೇನ ಸಹೋದ್ಯೋಗಿಯಾಗಿ ಕೆಲಸಮಾಡಿದ ಈತ ಸಮಸ್ಟಿ ಮನಶ್ಯಾಸ್ತ್ರದ (ಗೆಸ್ಟಾಲ್ಟ್ ಸೈಕಾಲಜಿ) ಪ್ರವರ್ತಕರಲ್ಲಿ ಒಬ್ಬ. ಕೊಯ್ಲರ್‍ನೊಂದಿಗೆ ವಿಶೇಷವಾದ ಸಂಶೋಧನೆ ನಡೆಸಿ ಗ್ರಂಥವೊಂದನ್ನು ಪ್ರಕಟಿಸಿದ. ಮರುವರ್ಷ ಮಕ್ಕಳ ಮೇಲೆ ಸಂಶೋಧನೆಗಳನ್ನು ನಡೆಸಿ ಸಮಷ್ಟಿ ಮನಶ್ಯಾಸ್ತ್ರಕ್ಕೆ ಸಮರ್ಥನೆ ಒದಗಿಸಿದ. ಈಚೆಗೆ ಪ್ರಕಟವಾದ ಶಿಶುಮನಶ್ಯಾಸ್ತ್ರ ಕಾಫ್ಕಾನ ಪ್ರಮುಖ ಗ್ರಂಥಗಳಲ್ಲೊಂದು. ತನ್ನ ಧ್ಯೇಯಧೋರಣೆಗಳ ಪ್ರಸಾರಕ್ಕೆಂದು ಸೈಕಾಲಜಿಷ್ ಫೋರ್‍ಷಂಗ್ (Psಥಿಛಿhoಟogisಛಿhe ಈoಡಿsಛಿhuಟಿg) ಎಂಬ ಪತ್ರಿಕೆಯನ್ನೂ ಈತ ಆರಂಭಿಸಿದನಲ್ಲದೆ ಇಂಗ್ಲೆಂಡ್ ಮತ್ತು ಅಮೆರಿಕ ದೇಶಗಳಲ್ಲಿ ಈ ಮನಶ್ಯಾಸ್ತ್ರ ವಿಭಾಗವನ್ನು ಬಹುಮಟ್ಟಿಗೆ ಪ್ರಚಾರಕ್ಕೆ ತಂದ.

 

(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ